ಅಭಿಪ್ರಾಯ / ಸಲಹೆಗಳು

ಆರ್‌ಎಸ್‌ಬಿವೈ (ರಾಷ್ಟ್ರ ಸ್ವಾಸ್ತಿಯಾ ಭೀಮಾ ಯೋಜನೆ)

 

ವಾಜಪೇಯಿ ಆರೋಗ್ಯಶ್ರೀ

 

ಯಶಸ್ವಿನಿ

 

RSBY (ರಾಷ್ಟ್ರೀಯ ಸ್ವಾಸ್ತ್ಯ ಭೀಮಾ ಯೋಜನೆ)

 

ಜನನಿ ಶಿಶು ಸುರಕ್ಷಾ ಯೋಜನೆ

 

ಸುವರ್ಣ ಆರೋಗ್ಯ ಚೈತನ್ಯ ಯೋಜನೆ

 

CGHS (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ)

 

ಡಾ. ಜಿ.ವೈ. ನಾಗರಾಜ್ (ವಿಮಾ ಅನುಷ್ಠಾನ ಅಧಿಕಾರಿ / ಸಲಹೆಗಾರ)

ಮಾಜಿ ಜಂಟಿ ನಿರ್ದೇಶಕರು, KHSDRP, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ

ರಾಜ್ಯ ಆರೋಗ್ಯ ವಿಮಾ ಕಾರ್ಯಕ್ರಮ ಅಧಿಕಾರಿ ಮತ್ತು PPP.

ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆಯ ಅನುಷ್ಠಾನದ ನಂತರ ಪ್ರಸ್ತುತ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು TOR ಮತ್ತು ಇತರೆ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ.

ರಾಜ್ಯಾದ್ಯಂತ PPP ಅಡಿಯಲ್ಲಿ ಮೊಬೈಲ್ ಆರೋಗ್ಯ ಚಿಕಿತ್ಸಾಲಯಗಳು ಮತ್ತು 150 ಕ್ಕೂ ಹೆಚ್ಚಿನ ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ವಿವಿಧ ಆಸ್ಪತ್ರೆಗಳಲ್ಲಿ ನಾಗರೀಕ ಸಹಾಯ ಕೇಂದ್ರಗಳು.

 

ವಾಜಪೇಯಿ ಆರೋಗ್ಯಶ್ರೀ ಯೋಜನೆ (VAS) :- BPL ಕಾರ್ಡ್ ಹೊಂದಿರುವವರಿಗೆ

  • ದಿನಾಂಕ 24.05.2013 ರಂದು SAST ನಿಂದ VAS ಯೋಜನೆಯನ್ನು ಎಂಪ್ಯಾನೆಲ್ ಮಾಡಲಾಗಿದೆ.

 

  • ವಿವಿಧ ವಿಶೇಷತೆಗಳ ಚಿಕಿತ್ಸೆಗಳನ್ನು ಹೃದ್ರೋಗ, ನರರೋಗ ಶಸ್ತ್ರ ಚಿಕಿತ್ಸೆ, ಸುರೂಪಿಕ ಶಸ್ತ್ರ ಚಿಕಿತ್ಸೆ, ಶಿಶುಶಸ್ತ್ರ ಚಿಕಿತ್ಸೆಗಳನ್ನು ನಮ್ಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (PMSSY) ಯಲ್ಲಿ BPL ಫಲಾನುಭವಿಗಳು 447 ಶಸ್ತ್ರ ಚಿಕಿತ್ಸಾ ಕಾರ್ಯವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವಿವರಗಳು ವೆಬ್‌ಸೈಟ್: www.sast.gov.in ನಲ್ಲಿ ಲಭ್ಯವಿರುತ್ತವೆ.
  • ಇಲ್ಲಿಯವರೆಗೆ ಸುಮಾರು 75 ಫಲಾನುಭವಿಗಳು ನೋಂದಾಯಿಸಿಕೊಂಡಿರುತ್ತಾರೆ.
  • ಇಲ್ಲಿಯವರೆಗೆ 47 ಕ್ಲೈಮ್‌ಗಳನ್ನು SAST ಅನುಮೋದಿಸಿದ್ದು, ಒಟ್ಟು ಮೊತ್ತ ರೂ.15,92,000/- (ಹದಿನೈದು ಲಕ್ಷದ ತೊಂಭತ್ತೆರಡು ಸಾವಿರ ರೂಪಾಯಿಗಳು ಮಾತ್ರ) ರಲ್ಲಿ ರೂ.1,59,200/- ಗಳ TDS ಮೊತ್ತವು ಕಡಿತಗೊಳಿಸಲಾಗಿರುತ್ತದೆ. ಹೀಗಾಗಿ ಒಟ್ಟು ಮೊತ್ತ ರೂ.14,34,800/- (ಹದಿನಾಲ್ಕು ಲಕ್ಷದ ಮೂವತ್ತಾನಾಲ್ಕು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ) ಗಳನ್ನು PMSSY SB ಖಾತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಮಾರುಕಟ್ಟೆ ಶಾಖೆ ಗೆ ಜಮಾ ಮಾಡಲಾಗಿದೆ.
  • BPL ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳನ್ನು ಆನ್‌ಲೈನ್‌ನಲ್ಲಿ ಆರೋಗ್ಯಮಿತ್ರ (AM) ಮತ್ತು VAMCO ಮೂಲಕ ಪರಿಶೀಲಿಸಲಾಗುತ್ತದೆ.
  • ಎಲ್ಲಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಗೆ ಮುನ್ನ SAST ನಿಂದ ಪೂರ್ವಾನುಮತಿ ಅನುಮೋದನೆಯನ್ನು ತೆಗೆದುಕೊಳ್ಳಲಾಗಿದೆ.
  • ರೋಗಿಯ ಫೋಟೋವನ್ನು ದಾಖಲಾಗುವ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆ ಹಾಗೂ ಶಸ್ತ್ರಚಿಕಿತ್ಸೆಗೆ ಮುನ್ನ ಮಾಡಲಾದ ಸಮಾಲೋಚನೆಯನ್ನು VAMCO/AM ಜೊತೆಗೆ ದಾಖಲಿಸಬೇಕಾಗುತ್ತದೆ ನಂತರ ಪೂರ್ವಭಾವಿ / ಕ್ಲೈಮ್‌ಗಳ ಪಾವತಿಗಾಗಿ ಕಳುಹಿಸಲಾಗುತ್ತದೆ.
  • ತುರ್ತು ಸಂದರ್ಭಗಳಲ್ಲಿ ನಾವು SAST ನಿಂದ ತುರ್ತು ಅನುಮೋದನೆಯನ್ನು ತೆಗೆದುಕೊಳ್ಳುತ್ತೇವೆ.
  • SAST ನಿಂದ ಪೂರ್ವಾನುಮತಿ ಅನುಮೋದನೆಗಾಗಿ ನಾವು ಪ್ರಯೋಜನ ಪ್ಯಾಕೇಜ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು, ISA ಇಂಪ್ಲಿಮೆಂಟಿಂಗ್ ಸಪೋರ್ಟ್ ಏಜೆನ್ಸಿ (AHRL) ಮೂಲಕ ಮೌಲ್ಯೀಕರಿಸಿದ ನಂತರ ಅದನ್ನು SAST ಅನುಮೋದಿಸುತ್ತದೆ.
  • ನಂತರ ಫಲಾನುಭವಿಗೆ ಕಾರ್ಯವಿಧಾನದ ಕೋಡ್ ಪ್ರಕಾರ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲಾಗುತ್ತದೆ.
  • ರೋಗಿಯ ಬಿಡುಗಡೆಯ ಸಮಯದಲ್ಲಿ, ಶಸ್ತ್ರಚಿಕಿತ್ಸೆಯ ನಂತರದ ಗಾಯದೊಂದಿಗಿನ ರೋಗಿಯ ಫೋಟೋ ಮತ್ತು ಡಿಸ್ಚಾರ್ಜ್ ಫೋಟೋ ಜೊತೆಗೆ ಡಿಸ್ಚಾರ್ಜ್ ಕಾರ್ಡ್ ಮತ್ತು TA ಮೊತ್ತವನ್ನು VAMCO/AM ಜೊತೆಗೆ ತೆಗೆದುಕೊಳ್ಳಲಾಗುತ್ತದೆ.
  • ರೋಗಿಯನ್ನು ಬಿಡುಗಡೆ ಮಾಡಿದ ನಂತರ 15 ದಿನಗಳ ಒಳಗಾಗಿ ನಾವು ಕೇಸ್ ಶೀಟ್‌ನ ಜೆರಾಕ್ಸ್ ಪ್ರತಿ, ಓಟಿ ಟಿಪ್ಪಣಿಗಳ ಟೈಪ್ ಮಾಡಿದ ಪ್ರತಿ, ಬಿಡುಗಡೆ ಸಾರಾಂಶ, ಕಾರ್ಯವಿಧಾನದ ಅಂತಿಮ ಬಿಲ್, ಕ್ರೋಢೀಕರಿಸಿದ ಬಿಲ್ ವಿವರಗಳು, ಅಂತಿಮ ಬಿಲ್, ಫಲಾನುಭವಿಯಿಂದ ಪಡೆದ ಪ್ರತಿಕ್ರಿಯೆ ಮುಂತಾದ ಎಲ್ಲಾ ಕಾರ್ಯವಿಧಾನದ ದಾಖಲೆಗಳನ್ನು ಸಲ್ಲಿಸಲಾಗುವುದು ಮತ್ತು MRI, CT ಸ್ಕ್ಯಾನ್, ಚೆಸ್ಟ್ ಎಕ್ಸ್-ರೇ ಮತ್ತು ರಕ್ತದ ಪರೀಕ್ಷೆಗಳಂತಹ ಮೂಲ ವರದಿಗಳನ್ನು AHRL ಗೆ ಕ್ಲೈಮ್ ಇತ್ಯರ್ಥಕ್ಕಾಗಿ ಸಲ್ಲಿಸಲಾಗುತ್ತದೆ ನಂತರ ಅಂತಿಮವಾಗಿ SAST ಕ್ಲೈಮ್‌ಗಳನ್ನು ಅನುಮೋದಿಸುತ್ತದೆ.
  • ನಂತರ SAST ಅನುಮೋದಿತ ಕಾರ್ಯವಿಧಾನದ ಕೋಡ್ ಮತ್ತು ಕ್ಲೈಮ್ಸ್ಗಳ ಪ್ರಕಾರ ಪ್ಯಾಕೇಜ್ ಮೊತ್ತವನ್ನು ಅನುಮೋದಿಸುತ್ತದೆ.
  • ನಂತರ ಅದೇ ಮೊತ್ತವನ್ನು ನಮ್ಮ ಉಳಿತಾಯ ಬ್ಯಾಂಕ್ ಖಾತೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಸಿಎಸ್ ಮೂಲಕ ಸಿಟಿ ಮಾರ್ಕೆಟ್ ಶಾಖೆಗೆ ಜಮಾ ಮಾಡಲಾಗುತ್ತದೆ. 

ಯಶಸ್ವಿನಿ :-

ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ

 

  • ಯಶಸ್ವಿನಿ ಯೋಜನೆಯನ್ನು ದಿನಾಂಕ 08/10/2012 ರಂದು ಆರೋಗ್ಯ ವಿಮೆಯಿಂದ PMSSY-SSH ಗೆ ಸೇರಿಸಲಾಯಿತು.
  • ಅಂದಿನಿಂದ ಯಶಸ್ವಿನಿ ಫಲಾನುಭವಿಗಳು 805 ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳನ್ನು ಬಳಸುತ್ತಿರುತ್ತಾರೆ, ಅದರಲ್ಲಿ ನಮ್ಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (PMSSY) ಹೃದ್ರೋಗ ಶಾಸ್ತ್ರ, ನರರೋಗ ಶಸ್ತ್ರ ಚಿಕಿತ್ಸಾ ಶಾಸ್ತ್ರ, ಸುರೂಪಿಕಾ ಶಸ್ತ್ರ ಚಿಕಿತ್ಸಾ ಶಾಸ್ತ್ರ, ಕರುಳುಬೇನೆ ಶಸ್ತ್ರ ಚಿಕಿತ್ಸಾ ಶಾಸ್ತ್ರ ಮತ್ತು ಶಿಶು ಶಸ್ತ್ರ ಚಿಕಿತ್ಸಾ ಶಾಸ್ತ್ರಗಳಂತಹ ವಿವಿಧ ವಿಶೇಷತೆಗಳಿಗೆ ಎಂಪ್ಯಾನೆಲ್ ಮಾಡಲಾಗಿದೆ.
  • ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ:- www.MDINDIA.networx.com
  • ಇಲ್ಲಿಯವರೆಗೆ ಸುಮಾರು 37 ಫಲಾನುಭವಿಗಳು ದಾಖಲಾಗಿದ್ದಾರೆ.
  • ಇಲ್ಲಿಯವರೆಗೆ 36 ಫಲಾನುಭವಿಗಳನ್ನು MDINDIA Ltd., ಅನುಮೋದಿಸಿದೆ ಒಟ್ಟು ಮೊತ್ತ ರೂ 5,49,500/- (ಐದು ಲಕ್ಷ ನಲವತ್ತೊಂಬತ್ತು ಸಾವಿರ ರೂಪಾಯಿಗಳು ಮಾತ್ರ) PMSSY SB ಖಾತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಮಾರ್ಕೆಟ್ ಶಾಖೆ, ಬೆಂಗಳೂರು-02 ಗೆ ಜಮಾ ಮಾಡಲಾಗಿದೆ.
  • ರಸೀದಿಯೊಂದಿಗೆ ಯಶಸ್ವಿನಿ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳನ್ನು ಸಂಯೋಜಕರು ಆನ್‌ಲೈನ್‌ನಲ್ಲಿ ಪರಿಶೀಲಿಸುತ್ತಾರೆ.
  • MDINDIA ನಿಂದ ಪೂರ್ವಾನುಮತಿ ಮಂಜೂರಾತಿಗಾಗಿ ನಾವು ಪ್ರಯೋಜನ ಪ್ಯಾಕೇಜ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು, ISA ಮೂಲಕ ಮೌಲ್ಯೀಕರಿಸಿದ ನಂತರ (ಅನುಷ್ಠಾನದ ಬೆಂಬಲ ಸಂಸ್ಥೆ ಇದನ್ನು MDINDIA ಅನುಮೋದಿಸುತ್ತದೆ.
  • ಅನುಮೋದನೆಗಾಗಿ ರೋಗಿಯ ಫೋಟೋವನ್ನು ದಾಖಲಾಗುವ ಸಮಯದಲ್ಲಿ ಮತ್ತು ಶಸ್ತ್ರಚಿಕಿತ್ಸೆಯ ಮೊದಲು ತೆಗೆದುಕೊಳ್ಳಬೇಕು.
  • ಎಲ್ಲಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಗೆ ಮುನ್ನ MD INDIA (ISA) ನಿಂದ ಪೂರ್ವಾನುಮತಿ ಅನುಮೋದನೆಯನ್ನು ತೆಗೆದುಕೊಳ್ಳಲಾಗಿದೆ.
  • ತುರ್ತು ಸಂದರ್ಭದಲ್ಲಿ ನಾವು MD ಇಂಡಿಯಾದಿಂದ ತುರ್ತು ಅನುಮೋದನೆಯನ್ನು ತೆಗೆದುಕೊಳ್ಳುತ್ತೇವೆ.
  • ನಂತರ ಫಲಾನುಭವಿಗೆ ಕಾರ್ಯವಿಧಾನದ ಕೋಡ್ ಪ್ರಕಾರ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲಾಗುತ್ತದೆ.
  • 10 ದಿನಗಳ ಒಳಗೆ ರೋಗಿಯನ್ನು ಬಿಡುಗಡೆ ಮಾಡಿದ ನಂತರ ನಾವು ಕ್ಲೈಮ್ ಇತ್ಯರ್ಥಕ್ಕಾಗಿ MD India ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳಾದ ಯಶಸ್ವಿನಿ ಐಡಿ, ಪ್ರೀಮಿಯಂ ರಶೀದಿ, ಪ್ರವೇಶ ರಶೀದಿ, ಅನುಮೋದನೆ ಪ್ರತಿ, ಪೂರ್ವಾನುಮತಿ ಪ್ರತಿ, ಓಟಿ ಟಿಪ್ಪಣಿಗಳು, ಅರಿವಳಿಕೆ ಟಿಪ್ಪಣಿಗಳು ಮತ್ತು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ತಪಾಸಣಾ ವರದಿಗಳನ್ನು ನಾವು ಲಗತ್ತಿಸಬೇಕು.
  • MD INDIA ಕ್ಲೈಮ್ ಇತ್ಯರ್ಥವನ್ನು ದೃಢೀಕರಿಸಿದ ನಂತರ yeshasvini c framers ಹೆಲ್ತ್ ಕೇರ್ ಟ್ರಸ್ಟ್ ಅನುಮೋದಿಸುತ್ತದೆ, ತದನಂತರ ಪ್ಯಾಕೇಜ್ ಮೊತ್ತವನ್ನು ಆಸ್ಪತ್ರೆಯ SB ಖಾತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, K.R ಮಾರುಕಟ್ಟೆ ಶಾಖೆ, ಬೆಂಗಳೂರು ಇಲ್ಲಿಗೆ ಇಸಿಎಸ್ ಮೂಲಕ ಜಮಾ ಮಾಡಲಾಗುತ್ತದೆ. 

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) :-

ಉದ್ಯೋಗಿಗಳು ಮತ್ತು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಗಳಿಗೆ

 

  • CGHS ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯನ್ನು 23/01/2013 ರಂದು PMSSYSSH ಗೆ ಸೇರ್ಪಡೆ ಮಾಡಲಾಯಿತು.
  • ಅಂದಿನಿಂದ CGHS ಫಲಾನುಭವಿಗಳು ಕಾರ್ಡಿಯಾಲಜಿ, ನ್ಯೂರೋಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಗ್ಯಾಸ್ಟ್ರೋ ಎಂಟರ್ಲಾಜಿ ಮತ್ತು ಪೀಡಿಯಾಟ್ರಿಕ್ ಸರ್ಜರಿಯಂತಹ ವಿವಿಧ ವಿಶೇಷತೆಗಳ ಸೇವೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ: www.mohfw.nic.in,cghsnew/index.asp
  • ಇಲ್ಲಿಯವರೆಗೆ ಸುಮಾರು 13 ಫಲಾನುಭವಿಗಳು PMSSY-SSH ನಲ್ಲಿ ಸೇವೆಗಳನ್ನು ಬಳಸಿಕೊಂಡಿದ್ದಾರೆ.
  • ಎಲ್ಲಾ CGHS ಪಿಂಚಣಿದಾರ ಫಲಾನುಭವಿಗಳು ಮತ್ತು ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಆದರೆ ಅವರು CGHS ಆರೋಗ್ಯ ಔಷಧಾಲಯಗಳಿಂದ ಉದ್ಯೋಗ ID ಕಾರ್ಡ್ ಮತ್ತು ರೆಫರಲ್ ಸ್ಲಿಪ್ ಅನ್ನು ಒದಗಿಸಬೇಕು ತದನಂತರ ನಾವು ಮೊತ್ತವನ್ನು ಕ್ಲೈಮ್ ಮಾಡುತ್ತೇವೆ.
  • ಇಲ್ಲಿಯವರೆಗೆ 11 ಕ್ಲೈಮ್‌ಗಳನ್ನು CGHS ಅನುಮೋದಿಸಿದೆ ಮೊತ್ತವು ರೂ. 13,654/- ಇದರಲ್ಲಿ ಕೇವಲ ರೂ. 11,658/- ಮತ್ತು ಉಳಿದ ರೂ.480/- ಶೀಘ್ರದಲ್ಲೇ ಮಾಡಲಾಗುತ್ತದೆ.
  • ಮೊದಲನೆಯದಾಗಿ ನಾವು ಫಲಾನುಭವಿಗಳಿಂದ ರೆಫರೆನ್ಸ್ ಸ್ಲಿಪ್ ಮತ್ತು ಗುರುತಿನ ಚೀಟಿಯನ್ನು ತೆಗೆದುಕೊಳ್ಳಬೇಕು ಮತ್ತು ನಂತರ ಅವರು OPD ನಲ್ಲಿ ನೋಂದಾಯಿಸಿಕೊಳ್ಳಬೇಕು.
  • ಅವರು ವಿಮಾ ಇಲಾಖೆಯಿಂದ ಸಹಿ ಮತ್ತು ಮೊಹರು ಪಡೆಯಲು ವಿಮಾ ವಿಭಾಗವನ್ನು ಸಂಪರ್ಕಿಸಬೇಕು ಮತ್ತು ಅವರು ಚಿಕಿತ್ಸೆಗಾಗಿ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಬಹುದು.
  • ಚಿಕಿತ್ಸೆಯನ್ನು ಪಡೆದ ನಂತರ ಅವರು ಕ್ಲೈಮ್‌ಗಾಗಿ ಸಂಬಂಧಿಸಿದ ದಾಖಲೆಗಾಗಿ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.
  • ನಾವು CGHS ಫಲಾನುಭವಿಗಳಿಗೆ ಬಿಲ್ ಅನ್ನು ಸಿದ್ಧಪಡಿಸಬೇಕು ಮತ್ತು ಆಸ್ಪತ್ರೆಯ ಪ್ರಾಧಿಕಾರದಿಂದ ಸಹಿ ತೆಗೆದುಕೊಳ್ಳಬೇಕು ಮತ್ತು ನಾವು CGHS ಇಲಾಖೆಗೆ ಹೆಚ್ಚುವರಿ ನಿರ್ದೇಶಕರು, 3ನೇ ಮಹಡಿ, ಇವಿಂಗ್, ಕೇಂದ್ರೀಯ ಸದನ್, ಕೋರಮಂಗಲ ಮತ್ತು ಬೆಂಗಳೂರು ಅವರಿಗೆ ಕ್ಲೈಮ್ ಅನ್ನು ಸಲ್ಲಿಸಬೇಕು.
  • ಹಾಗಾಗಿ ಒಂದು ತಿಂಗಳೊಳಗೆ ಕ್ಲೈಮ್ ಮೊತ್ತವನ್ನು ಆಸ್ಪತ್ರೆಯ ಎಸ್‌ಬಿ ಖಾತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಬೆಂಗಳೂರು ಇವರಿಗೆ ಜಮಾ ಮಾಡಲಾಗುತ್ತದೆ.

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY)

ಬಿಪಿಎಲ್ ವರ್ಗಕ್ಕೆ ಸೇರಿದ ಅಸಂಘಟಿತ ವಲಯದ ಕಾರ್ಮಿಕರು

 

  • ರಾಷ್ಟ್ರೀಯ ಸ್ವಾರ್ಥಿ ಬಿಮಾ ಯೋಜನೆಯನ್ನು ದಿನಾಂಕ 26/08/2013 ರಂದು ನಮ್ಮ ಆಸ್ಪತ್ರೆಗೆ ಎಂಪ್ಯಾನೆಲ್ ಮಾಡಲಾಗಿದೆ
  • ಇಲ್ಲಿಯವರೆಗೆ ಚಿಕಿತ್ಸೆ ಪಡೆದ ಮತ್ತು ನೀಡಿದ ಒಟ್ಟು ರೋಗಿಗಳ ಸಂಖ್ಯೆ 2 ಆಗಿದೆ
  • ರೂ.25,000/- ಮೊತ್ತದೊಂದಿಗೆ ಈ ಆಸ್ಪತ್ರೆಯಿಂದ ಒಟ್ಟು 2 ರೋಗಿಗಳು ಪ್ರಯೋಜನ ಪಡೆದಿದ್ದಾರೆ.
  • ಇಬ್ಬರು ರೋಗಿಗಳ ವೆಚ್ಚವನ್ನು ಅನುಮೋದಿಸಬೇಕಾಗಿದೆ ಮತ್ತು ಅದನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಮಾರುಕಟ್ಟೆ ಶಾಖೆ, ಬೆಂಗಳೂರು ಅವರಿಗೆ ಜಮಾ ಮಾಡಲಾಗುತ್ತದೆ.
  • ಪ್ರಸ್ತುತ ಈ ಯೋಜನೆಯನ್ನು ಕೇಂದ್ರ ಸರ್ಕಾರವು ನಿಲ್ಲಿಸಿದೆ ಮತ್ತು ಫೆಬ್ರವರಿ 2014 ರಲ್ಲಿ ಮತ್ತೆ ಪ್ರಾರಂಭಿಸಲಾಗುವುದು. 

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಕಾರ್ಯಕ್ರಮ):

ಗರ್ಭಿಣಿ ಸ್ತ್ರೀಯರು ಮತ್ತು 1 ವರ್ಷದೊಳಗಿನ ನವಜಾತ ಶಿಶು

 

  • NRHM ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಪ್ರಸವಪೂರ್ವ ಪ್ರಕರಣಗಳಿಗೆ ಪ್ರಸವಪೂರ್ವ ಮತ್ತು ಪ್ರಸವ ನಂತರದ ಚಿಕಿತ್ಸೆಗಾಗಿ ಅಗತ್ಯ ಸೇವೆಗಳನ್ನು ನೀಡಲಾಗುತ್ತದೆ.
  • ಎಲ್ಲಾ ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿರುವವರು, ಎಸ್‌ಸಿ ಮತ್ತು ಎಸ್‌ಟಿಗಳಿಗೆ 1 ವರ್ಷದವರೆಗಿನ ನವಜಾತ ಶಿಶುಗಳಿಗೆ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು. 

ಸುವರ್ಣ ಆರೋಗ್ಯ ಚೈತನ್ಯ ಯೋಜನೆ:

ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನೀಡುವ ಸೇವೆಗಳು.

 

  • ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಆರೋಗ್ಯ ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಲಾಗುವುದು. ಆ ಸಂದರ್ಭದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಾದ ಹೃದ್ರೋಗ ಹಾಗೂ ಇನ್ನೀತರೇ ರೋಗಗಳು ಪತ್ತೆಯಾದರೇ ಅಂತಹವರನ್ನು ರೆಫರಲ್ ಸ್ಲಿಪ್ ನೊಂದಿಗೆ ಪ್ರಮುಖ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುವುದು ಹಾಗೂ ಸಂಬಂಧಿಸಿದ ಶಸ್ತ್ರ ಚಿಕಿತ್ಸಕರಿಂದ ಮೇಲು ಸಹಿ ಮಾಡಬೇಕು. ನಂತರ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಬಂಧಿಸಿದ ಖಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಗುವುದು.

ಇತ್ತೀಚಿನ ನವೀಕರಣ​ : 04-02-2023 06:12 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080